ಭವಾನಿ “ಬಿಳಿ-ಮಚ್ಚೆ ರೋಗ” ಗೆದ್ದು ಬಂದಿದ್ದು ಹೇಗೆ?
ಸೇಡಂ ತಾಲ್ಲೂಕಿನ ಹಳ್ಳಿಯೊಂದರ 3 ವರ್ಷದ ಬಾಲಕಿಯ ಹೆಸರು ಭವಾನಿ (ಹೆಸರು ಬದಲಾಯಿದಸಲಾಗಿದೆ). 3 ವರ್ಷ ಪ್ರಾಯದ ಆ ಬಾಲೆಗೆ ಇನ್ನು ಅರಿವು ಮೂಡದ ವಯಸ್ಸು. ವಾರ್ಗಿಯವರೊಂದಿಗೆ ಆಟವಾಡುತ್ತಾ ಬೆಳೆಯುತ್ತಿದ್ದ ಆಕೆಗೆ, ಅವರ ವಂಶದಲ್ಲೆ ಇಲ್ಲದಂತಹ ಬಿಳಿ ಮಚ್ಚೆ ರೋಗ ಆವರಿಸಿತು. ಮೊದಲು ತಲೆ ಮೇಲೆ ಒಂದು ಚಿಕ್ಕ ಭಾಗದಲ್ಲಿ ಕಾಣಿಸಿಕೊಂಡ ಈ ರೋಗ ನಂತರದ ಅವಧಿಯಲ್ಲಿ ತಲೆ ಪೂರ್ತಿ ಆವರಿಸಲು ಶುರುವಾಯಿತು.
ಆಕೆಯ ತಂದೆ-ತಾಯಿ ಆರ್ಥಿಕವಾಗಿ ಅಷ್ಟೊಂದು ಸ್ಥಿತಿವಂತರು ಇಲ್ಲದಿರುವ ಕಾರಣ, ತಮ್ಮ ಕೈಗೆಟುಕುವಷ್ಟು ಔಷಧಿ ಕೊಡಿಸಿ, ಸುಮಾರು ತಿಂಗಳುಗಳು ಕಳೆದರೂ, ವಾಸಿಯಾಗದ ಕಾರಣ, ಕೈ ಚೆಲ್ಲ್ಲಿ ಕೂತಿದ್ದರು. ಆಗ ಅವರಿಗೆ, ಅವರ ಆಪ್ತರೊಬ್ಬರು ಕಲಬುರಗಿಯ ಜೀವಾ ಹೋಮಿಯೋಪತಿಯ ಬಗ್ಗೆ ತಿಳಿಸಿ, ಚಿಕಿತ್ಸೆ ಪಡೆಯಲು ಸಲಹೆ ಕೊಟ್ಟರು. ಹೋಮಿಯೋಪತಿ ಔಷಧಗಳ ಬಗ್ಗೆ ಅವರಿಗೆ ಅರಿವಿಲ್ಲದ ಕಾರಣ ಅವರ ಮನಸ್ಸಿನಲ್ಲಿ ಆತಂಕದ ಕಾರ್ಮೋಡ ಕವಿದಿತ್ತು.
ಸಾಬೂದಾನಿಯಂತೆ ಕಾಣುವ ಈ ಹೋಮಿಯೋಪತಿ ಔಷಧಗುಳು ಹೇಗೆ ಕೆಲಸ ಮಾಡುತ್ತವೆ ಎಂಬ ಸಂಶಯ ಅವರಲ್ಲಿ ಕಾಡುತ್ತಿತ್ತು. ಈ ತರಹದ ಆತಂಕ ಹಾಗು ಸಂಶಯದ ನಡುವೆಯೂ, ಅವರ ಮುಂದಿದ್ದ ಒಂದೇ ಒಂದು ಆಶಾಕಿರಣ ಆಗಿರುವಂತಹ ಜೀವಾ ಹೋಮಿಯೋಪತಿಗೆ ಬಂದು ಚಿಕಿತ್ಸೆ ಪ್ರಾರಂಭಿಸಿದರು.
ಜೀವಾ ಹೋಮಿಯೋಪತಿ ವೈಧ್ಯರು ಮೊದಲು ಅವರ ಮನಸ್ಸಿಲ್ಲಿದ್ದ ಆತಂಕ ದೂರ ಮಾಡಿ, ಯಾವುದೇ ಅಡ್ಡ-ಪರಿಣಾಮ ಇಲ್ಲದ ಹೋಮಿಯೋಪತಿ ಚಿಕಿತ್ಸೆಯ ವಿಧಿ-ವಿಧಾನಗಳನ್ನು ತಿಳಿಸಿ, ಈ ಚಿಕಿತ್ಸೆಯ ವೇಳೆಯಲ್ಲಿ ಸೇವಿಸಬೇಕಾದ ಆಹಾರಗಳನ್ನು ವಿವರಿಸಿ, ಚಿಕಿತ್ಸೆ ಪ್ರಾರಂಭಿಸಿದರು. ಮೊದಲ 3 ರಿಂದ 4 ತಿಂಗಳು ಚಿಕಿತ್ಸೆಯಲ್ಲಿ ಚೇತರಿಕೆ ಕಾಣದೇ ಹೋದರೂ, ನಂತರದ ದಿನಗಳಲ್ಲಿ ನಿಧಾನವಾಗಿ ಚೇತರಿಕೆ ಕಾಣತೊಡಗಿತು. ಸುಮಾರು 12 ತಿಂಗಳ ಧೀರ್ಘಾವಧಿಯ ಚಿಕಿತ್ಸೆಯ ನಂತರ, ಭವಾನಿಯು ಬಿಳಿ ಮಚ್ಚೆರೋಗದಿಂದ ಸಂಪೂರ್ಣವಾಗಿ ಗುಣವಾಗಿದ್ದು, ಇವಾಗ ಅವಳ ತಂದೆ ತಾಯಿ ನಿರಾತಂಕದ ಜೀವನ ನಡೆಸುತ್ತಿದ್ದಾರೆ. ಈ ತರಹದ ರೋಗಗಳಿಗೆ ಚಿಕಿತ್ಸೆ ಇಲ್ಲವೆಂದು ಭಾವಿಸಿದ್ದ ದಂಪತಿಗಳಿಗೆ ಜೀವಾ ಹೋಮಿಯೋಪತಿ ಒಂದು ಹೊಸ ಆಶಾಕಿರಣ ಮೂಡಿಸಿದೆ. ಭವಾನಿಯ ಭವಿಷ್ಯ ಸುಖಮಯ ಹಾಗು ಆರೋಗ್ಯಮಯ ಆಗಿರಲಿ ಎಂದು ಜೀವಾ ಹೋಮಿಯೋಪತಿ ಆಶಿಸುತ್ತದೆ.
ವಿಳಾಸ:
ಜೀವಾ ಹೋಮಿಯೋಪತಿ
ಪ್ಲಾಟ್ ನಂಬರ್ 498,
ಶಹಾಬಾದ್ ರಾಜಾಪೂರ್ ಕ್ರಾಸ್,
ಔಟರ್ ರಿಂಗ್ ರೋಡ್,
ವಿ ಎಫ್ ಆರ್ ಹೋಟೆಲ್ ಎದುರುಗಡೆ,
ಗುಲಬರ್ಗಾ (ಕಲಬುರಗಿ) 585105
ಸಂಪರ್ಕಿಸಿ: 9066675666 / 8884693333 / 9538426929
12 ತಿಂಗಳ ನಂತರ
Comments
Post a Comment